ಬಗ್ಗೆ

ಕುತೂಹುಳ | 𑀓𑀼𑀢𑀽𑀳𑀼𑀴 | kutūhuḷa

ಸೈನ್ಸ್ ಅನ್ನ ಸರಳವಾಗಿ, ಕನ್ನಡದಲ್ಲಿ ಹೇಳೋ ಪ್ರಯತ್ನ.

ಇಲ್ಲಿ ಎರಡು ತರಹದ ಕೆಲಸ ಇದೆ. ಒಂದು — ನಮ್ಮ ಸುತ್ತ ಇರೋ ವಿಷಯಗಳನ್ನ ಸೈನ್ಸ್ ಕಣ್ಣಲ್ಲಿ ನೋಡೋ ಸಣ್ಣ ವೀಡಿಯೋಗಳು. ಇನ್ನೊಂದು — ಬೇರೆ ಬೇರೆ ಕೆಲಸಕ್ಕೆ ಬರೋ ಟೂಲ್ಸ್ — ಡಿಕ್ಷನರಿ, ಬಸ್-ಟ್ರೇನ್ ಮ್ಯಾಪ್ ಮೇಕರ್, ಹುಳ-ಹುಪ್ಪಟೆ ಗುರುತಿಸೋ ಟ್ಯಾಗ್ ಸಿಸ್ಟಮ್, ಅಕ್ಷರಗಳ ನೆರಳಿನ ಆಟ.

ಕಷ್ಟದ ಪದಗಳಿಲ್ಲ. ಕ್ಲಿಕ್‌ಬೈಟ್ ಇಲ್ಲ. ಜಗತ್ತು ಹೇಗೆ ಕೆಲಸ ಮಾಡುತ್ತೆ ಅನ್ನೋದನ್ನ ನೇರವಾಗಿ ಹೇಳೋದು ಅಷ್ಟೇ.

ಇದನ್ನ ಒಬ್ಬರೇ ಮಾಡ್ತಿದ್ದಾರೆ, ಸ್ವತಂತ್ರವಾಗಿ.